ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಹೋಗಿದ್ದ 135 ವರ್ಷ ಪುರಾತನ ಪೋರ್ಚುಗೀಸ್ ಕಟ್ಟಡ ಪತ್ತೆ!

ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಹೋಗಿದ್ದ 135 ವರ್ಷಗಳ ಪುರಾತನ ಪೋರ್ಚುಗೀಸ್ ಕಾಲದ ಕಟ್ಟಡವೊಂದನ್ನು ಹುಬ್ಬಳ್ಳಿ ವಿಭಾಗದ ನೈಋತ್ಯ ರೈಲ್ವೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

Published: 12th March 2021 01:42 PM  |   Last Updated: 12th March 2021 05:34 PM   |  A+A-

Portuguese-era structure, tucked away in Western Ghats, discovered

ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಹೋಗಿದ್ದ 135 ವರ್ಷ ಪುರಾತನ ಪೋರ್ಚುಗೀಸ್ ಕಟ್ಟಡ ಪತ್ತೆ!

Posted By : Srinivas Rao BV
Source : The New Indian Express

ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಹೋಗಿದ್ದ 135 ವರ್ಷಗಳ ಪುರಾತನ ಪೋರ್ಚುಗೀಸ್ ಕಾಲದ ಕಟ್ಟಡವೊಂದನ್ನು ಹುಬ್ಬಳ್ಳಿ ವಿಭಾಗದ ನೈಋತ್ಯ ರೈಲ್ವೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ದಶಕಗಳ ಕಾಲ ಈ ಪುರಾತನ ಕಟ್ಟಡ ಮುಚ್ಚಿಹೋಗಿತ್ತು. ಎರಡು ಅಂತಸ್ತಿನ ಈ ಕಟ್ಟಡ, ದೇಶದ ಪ್ರಸಿದ್ಧ ದೂಧ್ ಸಾಗರ್ ಜಲಪಾತದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕ್ಯಾಸ್ಟೆಲ್ ರಾಕ್ ಬಳಿಯ ಬ್ರಗಾನ್ಜಾ ಘಾಟ್ ನಲ್ಲಿದೆ. 

ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಪುರಾತನ ಕಟ್ಟಡ ಪತ್ತೆಯಾಗಿರುವುದರ ಬಗ್ಗೆ ಸಂಭ್ರಮ ವ್ಯಕ್ತಪಡಿಸುತ್ತಿದ್ದು, ಈ ಕಟ್ಟಡವನ್ನು ಸಂರಕ್ಷಿಸಿ, ಪಾರಂಪರಿಕ ಪ್ರಿಯರಿಗೆ ಪ್ರವಾಸದ ವೇಳೆ ತಂಗಲು ಅವಕಾಶ ಮಾಡಿಕೊಡುವ ಚಿಂತಯಲ್ಲಿದೆ. 

ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ ಮಿಶ್ರಾ ನೀಡುವ ಮಾಹಿತಿಯ ಪ್ರಕಾರ, "1,200  ಚದರ ಅಡಿ ಇರುವ 2 ಅಂತಸ್ತಿನ ಈ ಕಟ್ಟಡ 1885 ರಲ್ಲಿ ಈ ಭಾಗದಲ್ಲಿ ಮೊದಲ ಬಾರಿಗೆ ಮೀಟರ್ ಗೇಜ್ ರೈಲು ಸಂಚಾರ ಪ್ರಾರಂಭವಾದಾಗ ರೈಲು ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿತ್ತು. ಅಂತಸ್ತಿನ ಕೆಳಭಾಗದಲ್ಲಿ ಸ್ಟೇಷನ್ ಮಾಸ್ಟರ್ ಕೊಠಡಿ ಇದ್ದರೆ, ಅದೇ ಅಂತಸ್ತಿನಲ್ಲಿರುವ ಇನ್ನೂ ಎರಡು ಕೊಠಡಿಗಳನ್ನು ಶೌಚಾಲಯ ಹಾಗೂ ಸ೦ಗ್ರಹಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಮೊದಲ ಅಂತಸ್ತಿನಲ್ಲಿ ಬೃಹತ್ ಡ್ರಾಯಿಂಗ್ ರೂಮ್, ಮಲಗುವ ಕೊಠಡಿ ಹಾಗೂ ಅಡುಗೆ ಮನೆಗಳೂ ಇವೆ, ಎರಡನೆ ಅಂತಸ್ತಿನಲ್ಲಿ ನಿಂತರೆ ವಿಹಂಗಮ ನೋಟ ಲಭ್ಯವಾಗಲಿದೆ".

1885 ರಲ್ಲಿ ಈ ಎರಡು ಅಂತಸ್ತಿನ ಕಟ್ಟಡವನ್ನು ವೆಸ್ಟ್ ಆಫ್ ಇಂಡಿಯಾ ಪೋರ್ಚುಗೀಸ್ ಗ್ಯಾರೆಂಟೀಡ್ ರೈಲ್ವೆ (ಡಬ್ಲ್ಯುಐಪಿಜಿಆರ್) ಕಂಪನಿ ಇದನ್ನು ನಿರ್ಮಿಸಿತ್ತು. ಗೋವಾದಲ್ಲಿ ಮರ್ಮಗೋವಾ ಬಂದರು ನಿರ್ಮಾಣದವೇಳೆ ಡಬ್ಲ್ಯುಐಪಿಜಿಆರ್ ನ ಐತಿಹಾಸಿಕ ಯೋಜನೆಯ ಭಾಗ ಇದಾಗಿತ್ತು ಎಂದು ಪಿ.ಕೆ ಮಿಶ್ರಾ ಹೇಳಿದ್ದಾರೆ. 

ಈ ಭಾಗದಲ್ಲಿ ಗೇಜ್ ಪರಿವರ್ತನೆ ವೇಳೆ ಪೋರ್ಚುಗೀಸರ ಕಾಲದ ಹಲವು ಕಟ್ಟಡಗಳು ನೆಲಸಮಗೊಂಡಿವೆ. ಈಗ ಪತ್ತೆಯಾಗಿರುವ ಕಟ್ಟಡ ಇತಿಹಾಸಕ್ಕೆ ಪುರಾವೆಯಾಗಿದೆ ಹಾಗೂ ಪೋರ್ಚುಗೀಸ್ ಅವಧಿಯ ಆಸಕ್ತಿದಾಯಕ ವಾಸ್ತುಶಿಲ್ಪದ ಲಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ. 

ಸಂರಕ್ಷಣೆಯ ಯೋಜನೆಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಪಿ.ಕೆ ಮಿಶ್ರಾ, ಕಟ್ಟಡದ ಮೊದಲ ಎರಡು ಮಹಡಿಗಳಲ್ಲಿ ಪಾರಂಪರಿಕ ಗ್ಯಾಲರಿ ಇರಲಿದೆ. ಕೆಳಭಾಗದಲ್ಲಿ ವಿಶ್ರಾಂತಿ ಗೃಹ ಇರಲಿದೆ, ಅಷ್ಟೇ ಅಲ್ಲದೇ ದೂಧ್ ಸಾಗರ್ ಪ್ರದೇಶದಾದ್ಯಂತ ಹೆರಿಟೇಜ್ ವಾಕ್ ನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದು ಮಾಹಿತಿ ನೀಡಿದ್ದಾರೆ. 

Stay up to date on all the latest ರಾಜ್ಯ news with The New Indian Express App. Download now
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the newindianexpress.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on newindianexpress.com are those of the comment writers alone. They do not represent the views or opinions of newindianexpress.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. newindianexpress.com reserves the right to take any or all comments down at any time.

facebook twitter whatsapp